Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬರ್ತ್‌ಡೇ ಸಂಭ್ರಮದಲ್ಲಿ ಹ್ಯಾಪೀ ಬರ್ತ್‌ಡೇ ಸಚಿನ್
Posted date: 24 Sun, Jan 2016 – 08:42:27 AM

ಸಕ್ಕರೆನಾಡು ಮಂಡ್ಯದಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಮರಳಿರುವ ಹ್ಯಾಪೀ ಬರ್ತ್‌ಡೇ . . . . ಚಿತ್ರ ತಂಡ ಸಕ್ಕರೆಗಿಂತಲೂ ಸಿಹಿಯಾದ ಸುದ್ದಿಯೊಂದನ್ನು ಹೊತ್ತು ತಂದಿದೆ.  ಅದೇ ಚಿತ್ರದ ನಾಯಕನ ಬರ್ತ್‌ಡೇ ಸಂಭ್ರಮ. ಚಿತ್ರೀಕರಣದ ಆರಂಭದಿಂದಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಚಿತ್ರ ಹ್ಯಾಪಿ ಬರ್ತ್‌ಡೇ ಚಿತ್ರದ ನಾಯಕ ಸಚಿನ್ ಈಗ ಬರ್ತ್‌ಡೇ ಬಾಯ್ ಇದೇ ತಿಂಗಳ ೨೧ರಂದು ಸಚಿನ್, ತಮ್ಮ ಹುಟ್ಟು ಹಬ್ಬವನ್ನು ಕುಟುಂಬ ವರ್ಗ ಮತ್ತು ಚಿತ್ರ ತಂಡದೊಂದಿಗೆ   ಶ್ರೀ ಗುರುರಾಯರ ಸನ್ನಿಧಿಯಲ್ಲಿ ಸರಳವಾಗಿ ಆಚರಿಸಿಕೊಂಡರು.
ಸಂಭ್ರಮ, ಸೈನಿಕ - ಯಶಸ್ವೀ ಚಿತ್ರಗಳ ಸೂತ್ರಧಾರ ಕೆ. ಮಹೇಶ್ ಸುಖಧರೆ ವಿಭಿನ್ನವಾಗಿ ನಿರೂಪಿಸಿರುವ, ವೈವಿಧ್ಯಮಯ ಗ್ರಾಮೀಣ ಸೊಗಡಿನ ಈ ಚಿತ್ರ ಮಂಡ್ಯ ಸುತ್ತಮುತ್ತಲಿನ ನಿಸರ್ಗ ರಮಣೀಯ ಸ್ಥಳಗಳಲ್ಲಿ ನಿರಂತರ ೯೦ ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಮಂಡ್ಯದ ದೇಸೀಹಳ್ಳಿಯಲ್ಲಿ ಸಂಕ್ರಾಂತಿಯಂದು ಸಂಘ್ರಮಾಚರಣೆಯಲ್ಲಿ ಪಾಲುಗೊಳ್ಳುವುದರೊಂದಿಗೆ ಚಿತ್ರ ತಂಡ, ಮಾತಿನ ಭಾಗದ ಚಿತ್ರೀಕರಣ ಮುಗಿಸಿದೆ.
ಚಿತ್ರದಲ್ಲಿ ನಾಯಕನಾಗಿ ಸಚಿನ್, ನಾಯಕಿಯಾಗಿ ಸಂಸ್ಕೃತಿ - ಜೊತೆಗೆ ಅಚ್ಯುತ, ರವಿಕಾಳೆ, ದತ್ತಾತ್ರೇಯ, ರಾಜೇಶ್ ನಟರಂಗ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಚಿಕ್ಕಣ್ಣ, ನೀನಾಸಂ ಅಶ್ವಥ್, ಪ್ರಶಾಂತ್ ಸಿದ್ಧಿ, ಅರುಣಾ ಬಾಲರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ವಿ. ಹರಿಕೃಷ್ಣ ಅವರ ಸಂಗೀತ, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಈ ಚಿತ್ರಕ್ಕಿದ್ದು, ಛಾಯಾಗ್ರಾಹಕರಾಗಿ ಸುರೇಶ್ ಜಯಕೃಷ್ಣ, ಸಾಹಸ ನಿರ್ದೇಶಕರಾಗಿ ರವಿಮರ್ವ, ಜಾಲಿ ಬಾನ್ಟನ್ ಮತ್ತು ಥ್ರಿಲ್ಲರ್ ಮಂಜು ತಾಯಣ್ಣ ನಿರ್ವಹಿಸಿದ್ದಾರೆ. ನಾಗಮಂಗಲ ಕೃಷ್ಣಮೂರ್ತಿಯವರ ನವಿರಾದ ಸಂಭಾಷಣೆ ಈ ಚಿತ್ರಕ್ಕಿದೆ. 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬರ್ತ್‌ಡೇ ಸಂಭ್ರಮದಲ್ಲಿ ಹ್ಯಾಪೀ ಬರ್ತ್‌ಡೇ ಸಚಿನ್ - Chitratara.com
Copyright 2009 chitratara.com Reproduction is forbidden unless authorized. All rights reserved.